ಜನನ ದಿನಾಂಕ: 18-12-1930
ಜಾತಿಘಟಕ: ಭಾಲಾವಲೀಕರ್
ಕುಲದೇವರು: ಮಂಗೇಶ-ಮಹಾಲಕ್ಷ್ಮಿ
ಗೋತ್ರ: ಧನಂಜಯ
ನಿವಾಸ: 7, ಉಷ;ಕಾಲ, ಸಾಹಿತ್ಯ ಸಹವಾಸ್ ಬಾಂದ್ರೆ(ಪೂ)
ಮುಂಬೈ ೪೦೦೫೧
ಕಾವ್ಯ ಮತ್ತು ಸಮೀಕ್ಷೆ ಲೇಖನದಲ್ಲಿ ಪ್ರೊ.
ರಮೇಶ ತೆಂಡುಲ್ಕರ್ ಹೆಸರು ಅಗ್ರಮಾನ್ಯವಾಗಿದೆ.
ಅವರು ಅಲೀಬಾಗ್ ತಾಲೂಕಿನ ವೇಶವೀ ಊರಿನಲ್ಲಿ ಬಾಲ್ಯವನ್ನು ಕಳೆದರು. ಅಲೀಬಾಗ್ ನ ಕೊಂಕಣ ಎಜುಕೇಶನ್ ಸೊಸೈಟಿಯ ಇಂಡಸ್ಟ್ರಿಯಲ್
ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಪಡೆದರು. 1947ರಲ್ಲಿ
ಮೆಟ್ರಿಕ್ ಪರೀಕ್ಷೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದರು. ಮುಂಬೈಯ ಸಿದ್ಧಾರ್ಥ ಕಾಲೇಜ್ ನಲ್ಲಿ ಬಿ.ಎ. ಪದವಿ
ಪಡೆದರು. ಬಿ.ಎ.ಯಲ್ಲಿ ತರ್ಖಡ್ ಕರ್ ಸುವರ್ಣ ಪದಕ
ಮತ್ತು ಫೆಲೋಶಿಪ್ ಪಡೆದರು. ಎಂ.ಎ. ಯಲ್ಲಿ ನ.ಚಿ.ಕೇಳ್ಕರ್
ಸುವರ್ಣ ಪದಕ ಪಡೆದರು. ಓದುವುದು ಬರೆಯುವುದು
ಅವರು ಬಾಲ್ಯದಿಂದಲೇ ಕರಗತ ಮಾಡಿಕೊಂಡ ಅಭ್ಯಾಸ. ಅದರ ಉಪಯೋಗ ಅವರಿಗೆ ಮಹಾವಿದ್ಯಾಲಯ ಮಟ್ಟದಲ್ಲಿ ಪ್ರಯೋಜನವಾಯಿತು. ಕುಮಾರ ಸಾಹಿತ್ಯ ಚಳುವಳಿಯಲ್ಲಿ ಅವರು
ಭಾಗವಹಿಸಿದ್ದರು. ರಹಾಳ್ ಕರ್ ಮತ್ತು ಆವಳಸ್ಕರ್
ಎಂಬ ಸಂಶೋಧಕರ ಪ್ರೋತ್ಸಾಹ ಅವರ ಬರವಣಿಗೆಗೆ ವರದಾನವಾಯಿತು.
೧೮ನೇ ವರ್ಷ ವಯಸ್ಸಿನಲ್ಲಿ ಪೋಲಿಸ್ ಆಯುಕ್ತರ ಕಚೇರಿಯಲ್ಲಿ M.O. B. ವಿಭಾಗದಲ್ಲಿ ಉದ್ಯೋಗಕ್ಕೆ
ಸೇರಿದರು. ವಾಂಙ್ಮಯ ಪ್ರಾಜ್ಞ ಪರಿಷದ್ ನ ತರಗತಿಗಳು ಅಲ್ಲೇ ನಡೆಯುತ್ತಿದ್ದವು. ಮರ್ಡೆಕರ್ , ದಾ.ರಾ.ಕುಲಕರ್ಣಿ ಮುಂತಾದವರ ಪರಿಚಯ
ಅಲ್ಲಿ ಅವರಿಗಾಯಿತು. ಅಧ್ಯಯನದೊಂದಿಗೆ ಅಧ್ಯಾಪನದಲ್ಲಿಯೂ
ಅವರಿಗೆ ಮಾರ್ಗದರ್ಶನ ಲಭಿಸಿತು. ಅಲ್ಲೇ ತೆಂಡುಲ್ಕರ್
ರಿಗೆ ಭಾಷಣ ಮಾಡುವ ಸುಯೋಗ ಲಭಿಸಿತು. ಅಲ್ಲಿ
ಶ್ರೀ ಮಾಧವ ಮನೋಹರ ಹಿಂದಿನಿಂದ ಬಂದು ತೆಂಡುಲ್ಕರರ
ಭಾಷಣ ಕೇಳಲಾರಂಭಿಸಿದರು. ಅವರಿಗೆ ತುಂಬಾ ಸಂತೋಷವಾಯಿತು.
ಶ್ರೀ ಅನಂತ ಕಾಣೆಕರ್ ರಿಗೂ ಕೇಳಿ ಖುಷಿಯಾಯಿತು.
ಅವರು ತೆಂಡುಲ್ಕರ್ ರನ್ನು ಸಿದ್ಧಾರ್ಥ ಕಾಲೇಜಿಗೆ ಲೆಕ್ಚರರ್ ಆಗಿ ನೇಮಕ ಮಾಡಲು ಶಿಫಾರಸು
ಮಾಡಿದರು.
ಸಿದ್ಧಾರ್ಥ ಕಾಲೇಜ್ ನಲ್ಲಿ (1955-67) 12 ವರ್ಷ ಅವರು ಸೇವೆ ಸಲ್ಲಿಸಿದ್ದಾರೆ. 1967ರಲ್ಲಿ ಕೀರ್ತಿ ಕಾಲೇಜ್ ನಲ್ಲಿ H.O.D. ಆಗಿ ನೇಮಕಗೊಂಡರು. ಮರಾಠಿಯಲ್ಲಿ ಉತ್ತಮ ಶಿಕ್ಷಕನೂ, ವಿದ್ಯಾರ್ಥಿ ಪ್ರಿಯನೂ
ಆಗಿದ್ದರು. ಹತ್ತು ಉದಯೋನ್ಮುಖ ಕವಿಗಳ ಕವಿತಾ
ದಶಕವನ್ನು ಗ್ರಂಥಾಲೀ ಪ್ರಕಾಶನದ ಮುಖಾಂತರ ಸಂಪಾದಿಸಿ ಪ್ರಕಟಿಸಿದರು. 1960 ರ ವರೆಗಿನ ಅರ್ವಾಚೀನ ಕವಿಗಳ ಕವಿತೆಗಳನ್ನು ಸಂಪಾದಿಸಿ
ಪ್ರಕಟಿಸಿದರು. ಅವರ ಕವಿತೆಗಳು ಇತರ ಭಾಷೆಗಳಿಗೂ
ತರ್ಜುಮೆಗೊಂಡಿವೆ. ಅನೇಕ ಕವಿತೆಗಳು ಪಠ್ಯ ಪುಸ್ತಕದೊಳಕ್ಕೂ ಸೇರಿಕೊಂಡಿವೆ.
ಅವರ
ಕವಿತಾವಾಚನ ಕಾರ್ಯಕ್ರಮ ದೂರದರ್ಶನ ಮತ್ತು ಆಕಾಶವಾಣಿಯಲ್ಲೂ ಬಿತ್ತರಗೊಂಡಿದೆ. ಭಾ. ರಾ. ತಾಂಬೆ, ಪು.ಶಿ.ರೇಗೆ, ಅನಂತ ಕಾಣೆಕರ್, ಬಾ.ಭ.ಬೋರ್ಕರ್,
ಗ. ದಿ.ಮಡಗೂಳ್ ಕರ್ ಇವರ ಕಾವ್ಯ ಸಮೀಕ್ಷೆಯಿದ್ದ ಪ್ರಥಮ ಸ್ವತಂತ್ರ ಗ್ರಂಥಕ್ಕೆ ಮಹಾರಾಷ್ಟ್ರ
ಸರಕಾರದ ಪಾರಿತೋಷಕ ಲಭಿಸಿದೆ.
ಅನಂತ ಕಾಣೆಕರ್ ರ “ ಚೌಕೊನೀ ಆಕಾಶ್ “, ಇಂದಿರಾ ಸಂತರ “ಮೃಣ್ಮಯೀ “ ಕವಿತೆಗಳಿದ್ದ
ಪುಸ್ತಕದ ಸಂಪಾದಕತ್ವವೂ ತೆಂಡುಲ್ಕರರದ್ದಾಗಿತ್ತು.
ಅದಕ್ಕೆ ಗಂಗಾಧರ ಗಾಡ್ಗೀಳ್ ರ ಮುನ್ನುಡಿಯೂ ಮುಕುಟವಿಟ್ಟಿತ್ತು. ಕಾವ್ಯ ಮತ್ತು ಸಮೀಕ್ಷೆಯ ಬಗೆಗಿನ ಲೇಖನಗಳೇ ಅವರ
ಹೆಚ್ಚಿನ ಬರವಣಿಗೆಯಾಗಿತ್ತು. ಹಳೆಯ ಕವಿತೆಗಳನ್ನು
ಸಂಶೋಧಿಸಿ, ಸಂಪಾದಿಸಿ ಪ್ರಕಟಿಸಿರುತ್ತಾರೆ. “ಆಠ್
ವಣೀ ತಲ್ಯಾ ಕವಿತಾ” ಸಂಗ್ರಹವೆನ್ನುವ ಈ ಪುಸ್ತಕ ಪ್ರಕಾಶನದ ಅಂಗಡಿಗೆ ಬರುವುದಕ್ಕೆ ಮೊದಲೇ ಕೈಯಿಂದ
ಕೈಗೆ ಮೂರು ಸಾವಿರ ಪ್ರತಿಗಳೂ ಮಾರಟವಾದವಂತೆ.
ವಿ.ಸೂ : ರಮೇಶ ಟೆಂಡುಲ್ಕರ್, ಕ್ರಿಕೆಟ್ ತಾರೆ ಸಚಿನ್ ತೆಂಡುಲ್ಕರ್ ರ ತಂದೆ. ಇವರ ಪೂರ್ವಜರು ಭಾಲಾವಲಿಯಿಂದ ನಾಲ್ಕೈದು ಕಿ.ಮೀ. ದೂರದ ಹರ್ಚೆ ತೆಂಡುಲ್ಕರ್ ವಾಡಿಯಿಂದ ಮುಂಬೈಗೆ ವಲಸೆ ಹೋದವರು.
ಇತಿ,
BSBS
No comments:
Post a Comment