ಜನ್ಮ; 9-9-1913
ಸ್ಥಳ:
ಭಡೇ
ಮರಣ ; 13-9-1985
ಗೋತ್ರ : ಧನಂಜಯ
ಜಾತಿ ಘಟಕ: ಭಾಲಾವಲೀಕರ್
ಡಾ|
ದಾದಾ ಸಾಹೇಬ್ ತೆಂಡುಲ್ಕರ್ ಇವರು ರತ್ನಗಿರಿ
ತಾಲೂಕಿನ ಭಡೇ ಎಂಬ ಊರಿನಲ್ಲಿ ಜನಿಸಿದರು. 1919 ಇಸವಿಯಲ್ಲಿ
ತನ್ನ 6 ವರ್ಷ ವಯಸ್ಸಿನಲ್ಲಿ ತಮ್ಮ ತಂದೆ-ತಾಯಿಯವರೊಡನೆ “ಪುಣ್ಯ” ಎಂಬ ಊರಿನಲ್ಲಿ
ವಾಸ್ತವ್ಯವಿದ್ದುದರಿಂದ ಅವರ ಶಿಕ್ಷಣ ಅಲ್ಲೇ ನಡೆಯಿತು.
ಸಾರ್ವಜನಿಕ ಸೇವೆಯಲ್ಲಿ ತನ್ನ ತಂದೆಯವರೊಡನೆ ಅವರಿಗೂ ಅವಕಾಶ ದೊರೆಯಿತು. ತಂದೆಯ ಬಳಿಕ
ದಾದಾ ಸಾಹೇಬ್ ವೈದ್ಯಕೀಯ ಸೇವೆಯಲ್ಲಿ ತೊಡಗಿದರು.
ಸರಿಯಾದ ಸೂಕ್ತ ಚಿಕಿತ್ಸೆ, ಉತ್ತಮ ಔಷದೋಪಚಾರಕ್ಕೆ ಅವರು ಹೆಸರುವಾಸಿಯಾಗಿದ್ದರು. ಹಣದಾಸೆಯಿಲ್ಲದೆ, ಬಡವರಿಗೆ ಉಚಿತವಾಗಿಯೂ ಸೇವೆ
ನೀಡುತಿದ್ದರು. ಕುಟುಂಬ ಮತ್ತು ಸಮಾಜವೆರಡರಲ್ಲೂ
ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದರು.
1956 ರ ಮೊದಲು LONG LIFE INSURANCE COMPANY ಇತ್ತು. ಅದರ ಸಂಚಾಲಕರಾಗಿ, ಅಧ್ಯಕ್ಷರಾಗಿಯೂ ಕೆಲಸ ಮಾಡಿದರು. ತಳೇಗಾಂನ ಪೈಸಾ ಫಂಡ್ ಕಾಚ್ ಕಾರಖಾನೆಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. 17 ವರ್ಷ ಈ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ಆ ಸಮಯದಲ್ಲಿ ಕಾರಖಾನೆಯ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಅತ್ಯಂತ ಕಠಿಣ ಪರಿಶ್ರಮದಿಂದ ದಾದಾ ಸಾಹೇಬರು ಲಾಭ ಬರುವತ್ತ ತಂದು ನಿಲ್ಲಿಸಿದರು. “ಪುಣೆ ಪೀಪಲ್ಸ್ ಸಹಕಾರಿ ಬ್ಯಾಂಕ್” ನ 32 ವರ್ಷ ಸ್ಥಾಪಕರೂ ಅಧ್ಯಕ್ಷರೂ ಆಗಿದ್ದರು. 1952 ರ ವರೆಗೂ “ಪುಣ್ಯ” ದ ಸಾರಸ್ವತರ ಸಮಸ್ಯೆಗಳ ಪರಿಹಾರ, ಸಮಾಜೋನ್ನತಿಗಾಗಿ ಶ್ರಮಿಸಿರುತ್ತಾರೆ. 1981ರಲ್ಲಿ ನವಯುವಕರು ಸೇರಿ “ಸಾರಸ್ವತ ಮಿತ್ರ ಮಂಡಲ” ಹೆಸರಿನ ವೇದಿಕೆಯನ್ನು ಹುಟ್ಟುಹಾಕಿದರು. ದಾದಾ ಸಾಹೇಬ್ ಮಂಡಲದ ಕೇವಲ ಅಧ್ಯಕ್ಷರಷ್ಟೇ ಆಗಿರಲಿಲ್ಲ. ಪಿತೃ ದೇವರಂತೆ (GOD FATHER) ತನ್ನೆಲ್ಲ ಶಕ್ತಿಯನ್ನು ಪ್ರಯೋಗಿಸಿ ಸರ್ವಾಂಗೀಣವಾಗಿರುವಂತೆ ಮಾಡಿದರು.
ಇತಿ,
BSBS

No comments:
Post a Comment