ಜನ್ಮ ದಿನಾಂಕ: 6 -9 -1934
ಜನ್ಮಸ್ಥಳ: ಚರೀ(ಅಲೀಬಾಗ್)
ಜಾತಿ ಘಟಕ: ಭಾಲಾವಲೀಕರ್
ಗೋತ್ರ: ವಸಿಷ್ಠ
ಕುಲದೇವರು: ದೇವಕಿ ರವಳನಾಥ
ನಿವಾಸ ಸ್ಥಳ : 549, ವಿಲ್ಸಾ ಜಸವಂತ್, T.P.S. 3, ಖಾರ್ ಮುಂಬೈ -4000052
ದೂರವಾಣಿ: 6490790 (ನಿವಾಸ)
ಮುಂಬೈಯ ಟಾಟಾ ಮೆಮೋರಿಯಲ್ ಹಾಸ್ಪಿಟಲ್ ನ G U ಮತ್ತು G Y N ಸರ್ವಿಸ್ ನ ಮುಖ್ಯ ಸರ್ಜನ್
ಡಾ| ಮುರಲೀಧರ ಕಾಮತ್ ಇವರು ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಭಾರತದಲ್ಲಿಯೇ ತಜ್ಞ
ಡಾಕ್ಟರ್ 1957 ಅಕ್ಟೋ ಬರ್ ನಲ್ಲಿ ಆವರು M.B.B.S ಪರೀಕ್ಷೆ ಉತ್ತಿರ್ಣರಾಗಿ, 6 ವರ್ಷಗಳಲ್ಲಿ
“ಜನರಲ್ ಸರ್ಜರಿ” ಯಲ್ಲಿ M.Sc, ಮಾಡಿದರು. 1965ರಲ್ಲಿ F.C.P.S ಮತ್ತು 1977ರಲ್ಲಿ F.I.C.S
ಮಾಡಿದರು. 1958ರಿಂದ 1973ರ ಸಮಯದಲ್ಲಿ ವಾಡಿಯೂ, K.E.M, ಟಾ ಟಾ ಮತ್ತು V.S ನಲ್ಲಿ ಬಗ್ಗೆ
ಶಿಕ್ಷಣವನ್ನು
ಪಡೆದಿರುತ್ತಾರೆ
ಅವರಿಗೆ ತನ್ನ ವೈದ್ಯಕೀಯ, ಶೈಕ್ಷಣಿಕ ಸಮಯದಲ್ಲಿ “ಮನೋರಮಾ ಹಜರತ್ ಪಾರಿತೋಷಕ “(1954),
ಡಾ| ಶಿವಲ್ ಕರ್ ಸಿಲ್ವರ್ ಮೆಡಲ್(1955) N.A ಪುರಂದರೆ – ಈ ಪಾರಿತೋಷಕಗಳು ಲಭಿಸಿವೆ. 1970ರಲ್ಲಿ U.S. ನಲ್ಲಿ ನ್ಯೂ ಯಾರ್ಕ್ ಮತ್ತು ಬಫೆಲೋ,
ಇಲ್ಲಿ ಪ್ರಸ್ತುತ ಪಡಿಸಿದ ಪ್ರಬಂಧದ ಮೇಲೆ ಎರಡು ಪಾರಿತೋಷಕಗಳು ಲಭಿಸಿವೆ. ಶರೀರದಲ್ಲಿ ಬದಲಿ ಮೂತ್ರಾಶಯ (ಕಿಡ್ನಿ)
ವನ್ನು ಕಸಿ ಮಾಡಿದ ಭಾರತದ ಪ್ರಥಮ ಡಾಕ್ಟರ್ ಇವರು. 1971 ರಿಂದ 1987 ರ ನಡುವೆ ಭಾರತದ ಪ್ರಮುಖ
ನಗರಗಳಲ್ಲಿ ವೈದ್ಯಕೀಯ ಸೆಮಿನಾರ್ ಗಳಲ್ಲಿ “ಕ್ಯಾನ್ಸರ್” ಬಗ್ಗೆ 32 ಪ್ರಬಂಧಗಳನ್ನು ಇವರು ಮಂಡಿಸಿದ್ದಾರೆ. ಇವರು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಟ್ರಸ್ಟಿ ಮತ್ತು
ಜನರಲ್ ಸೆಕ್ರೆಟರಿಯೂ ಆಗಿದ್ದರು. ಮಹಾರಾಷ್ಟ್ರದ ರಾಜ್ಯಪಾಲರ “ ಆನರರಿ ಕ್ಯಾನ್ಸರ್
ಸ್ಪೆಷಲಿಸ್ಟ್” ಆಗಿದ್ದರು. ಮುಂಬೈ ಯೂನಿವರ್ಸಿಟಿಯಾ M.S. ಪರೀಕ್ಷೆಗೆ P.G ಟೀಚರ್
ಮತ್ತು ಮದ್ರಾಸ್ ಯೂನಿವರ್ಸಿಟಿಯ M.C.H ಅಂಕಾಲಜಿಯ ಎಕ್ಸಾಮಿನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಕೃಪೆ: ಗೌಡ ಸಾರಸ್ವತ ಸಮಾಜ ಪರಿಚಯ ಗ್ರಂಥ
ತರ್ಜುಮೆ : ಶ್ರೀ ಪುರುಷೋತ್ತಮ ಭಟ್ ದೇರ್ಕಜೆ
No comments:
Post a Comment