Monday, March 16, 2015

ಸಚಿನ್ ರಮೇಶ್ ತೆಂಡುಲ್ಕರ್

ಜನ್ಮ ದಿನಾಂಕ: 24-4-1973
ಕುಲದೇವರು : ಮಂಗೇಶ ಮಹಾಲಕ್ಷ್ಮೀ
ಜಾತಿಘಟಕ : ಭಾಲಾವಲೀಕಾರ್
ಗೋತ್ರ : ಧನಂಜಯ
ನಿವಾಸ:   ಉಷ:ಕಾಲ , ಸಾಹಿತ್ಯ ಸಹವಾಸ್, ಕಲಾ ನಗರ, ವಾಂದ್ರೆ(E)
                           ಮುಂಬೈ- 400051.
 ದೂರವಾಣಿ:  6421445(ಮನೆ)

     ಭಾರತೀಯ ಕ್ರಿಕೆಟ್ ಪ್ರಪಂಚದಲ್ಲಿ “WONDER BOY” ಎಂದೇ ಗೌರವದ ಉಲ್ಲೇಖ ಮತ್ತು ತನ್ನ ಕರ್ತೃತ್ವ ಶಕ್ತಿಯಿಂದ ಜಗದೆಲ್ಲೆಡೆ ಕ್ರಿಕೆಟ್ ಪಂಡಿತರು ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯ ವ್ಯಕ್ತಪಡಿಸಿದ ಅಭಿನವ ಅಭಿಮನ್ಯು  ನಮ್ಮ “ಸಚಿನ್ ತೆಂಡುಲ್ಕರ್ .
     ಮುಂಬೈಯ ಶಾರದಾಶ್ರಮ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವಾಗಲೇ ಓಟದ ಹುಡುಗನಾಗಿದ್ದ.  15-16 ವಯಸ್ಸಿನ ಬಾಲಕನಿದ್ದಾಗಲೇ ‘ರಣಜಿ ಕರಂಡಕ’ ದಲ್ಲಿ ಆಟವಾಡಿದ್ದ.  ಗುಜರಾತ್ ವಿರುದ್ಧದ ಈ ಆಟದಲ್ಲಿ ಶತಕವನ್ನು ಬಾರಿಸಿ ಮುಂದಿನ ಯಶಸ್ಸಿನ ಮುಹೂರ್ತವನ್ನು ಮಾಡಿದ್ದ.  ಇಷ್ಟು ಸಣ್ಣ ವಯಸ್ಸಿನಲ್ಲಿ ಶತಕವನ್ನು ಬಾರಿಸಿದ ವಿಶ್ವದಲ್ಲೇ ಎರಡನೆಯ ಬಾಲಕ ಎಂದು ದಾಖಲೆ ಮಾಡಿದ.  (ಮೊದಲ ವ್ಯಕ್ತಿ ಪಾಕಿಸ್ತಾನದ ಮುಶ್ತಾಕ್ ಮಹಮದ್).  ವಿದೇಶೀಯ ಪ್ರಥಮ ಪಂದ್ಯ ಅವನಿಗೆ ಪಾಕಿಸ್ತಾನದ ಎದುರಿಗಿತ್ತು.  16-17 ವರ್ಷದವನಿದ್ದಾಗ ಆ ಪಂದ್ಯದ ಸ್ಟೇಡಿಯಂ ಸುತ್ತಲೂ “ಮಗುವೇ , ಮನೆಗೆ ಹೋಗು, ಹಾಲುಕುಡಿ” ಎಂದು ದೊಡ್ಡ ದೊಡ್ಡ ಫಲಕಗಳನ್ನು ಹಾಕಿದ್ದರು.  ಆ ಪಂದ್ಯದಲ್ಲಿ ಸಚಿನ್ 59 ರನ್ ಮಾಡಿ ತನ್ನ ಪ್ರತಿಭೆಯನ್ನು ತೋರಿಸಿದ.  ಮರುದಿನ ಪಾಕಿಸ್ತಾನದ ಪತ್ರಿಕೆಗಳಲ್ಲಿ “ಎಚ್ಚರಿಕೆ ಎಚ್ಚರಿಕೆ ಬೆಂಕಿಯ ಚೆಂಡಿನಂತೆ ಮುನ್ನುಗ್ಗುತ್ತಿರುವ ಸಚಿನ್ ನನ್ನು ಎದುರಿಸುವುದು ಅಷ್ಟು ಸುಲಭವಲ್ಲ” ಎನ್ನುವರ್ಥದಲ್ಲಿ ಪ್ರಕಟವಾಯಿತು. ಮುಂದೆ 1990 ರಲ್ಲಿ ಇಂಗ್ಲೆಂಡ್ ವಿರುದ್ಧ, 1991-92 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್ ಗೆ ಆಡುವ ಅವಕಾಶ ದೊರೆಯಿತು.  ಈ ಎರಡೂ ಪಂದ್ಯಗಳಲ್ಲಿ ಅವನ ತಂತ್ರಗಾರಿಕೆಯನ್ನು ನೋಡಿ ಕ್ರಿಕೆಟ್ ಸಮೀಕ್ಷರು ಆಶ್ಚರ್ಯ ಚಕಿತರಾಗಿದ್ದಾರೆ.
     ಇಷ್ಟು ಸಣ್ಣ ವಯಸ್ಸಿನಲ್ಲಿ ಕ್ರಿಕೆಟ್ ಲೋಕದಲ್ಲಿ ವಿಸ್ಮಯವನ್ನು ಮಾಡಿದ ಈ ಬಾಲವೀರ ಭವಿಷ್ಯದಲ್ಲಿ ವಿಕ್ರಮ  ಸಾಧಕನಾಗುತ್ತಾನೆಂದು ಕ್ರಿಕೆಟ್ ಸಮೀಕ್ಷಕರು ಆಗಲೇ ಅಭಿಪ್ರಾಯ ಪಟ್ಟಿದ್ದಾರೆ.  ಪ್ರತಿ 5 ಪಂದ್ಯಗಳಲ್ಲಿ ಒಂದು ಶತಕವನ್ನಾದರು ಬಾರಿಸಿ, ಅಧಿಕ ರನ್  ಗಳಿಸುತ್ತಾ ಮುಂದುವರಿದ.  ಅತ್ಯಂತ ವಿನಯಶೀಲ ಗುಣದ ಸಚಿನ್ ತನ್ನ ಮಾತಾ-ಪಿತರನ್ನು, ಅಜಿತ್ ದಾದಾ ರನ್ನು ದೇವರಂತೆ ಕಾಣುತ್ತಿದ್ದ.  ಇಂದೂ “ಸಾಹಿತ್ಯ ಸಹವಾಸ” ದ ಹಳೆಯ ಮಿತ್ರರೊಂದಿಗೆ ಕ್ರಿಕೆಟ್ ಆಡುತ್ತಾನೆ. ಡೆನಿಸ್ ಕ್ರಾಂಪ್ಟನ್, ರಿಚರ್ಡ್ ಹಡ್ ಲಿ, ಸರ್ ಡಾನ್ ಬ್ರಾಡ್ಮನ್ ಇತ್ಯಾದಿ ಹಿರಿಯ ಆಟಗಾರರು ಸಚಿನ್ ತೆಂಡುಲ್ಕರ್ ನ್ನು ಪ್ರಶಂಶಿಸಿದ್ದಾರೆ.  ಚಿತ್ರಕಲೆ ಮತ್ತು ಪಾಪ್ ಮ್ಯೂಸಿಕ್ ಸಚಿನ್ ಗೆ ಬಹಳ ಇಷ್ಟ.
     ಸಚಿನ್ ತೆಂಡುಲ್ಕರ್ ಇವರ ಹಿರಿಯರು ಮೂಲತ: ರತ್ನಗಿರಿ ಜಿಲ್ಲೆಯ ಲಾಂಜಾ ತಾಲೂಕಿನ ಹರ್ಚೆಯವರು.  ಹರ್ಚೆ, ಭಡೆ, ಡೋರ್ಲೇ, ಇಲ್ಲೆಲ್ಲ ತೆಂಡುಲ್ಕರರ  ಕುಟುಂಬಗಳಿವೆ.  ಹರ್ಚೆ ಗೆ ಭಾಲಾವಲಿಯಿಂದ ಮುಚುಕುಂದಿ ನದಿಯನ್ನು ದಾಟಿ ಪ್ರಯಾಣಿಸುವುದಾದರೆ ಕೇವಲ 3 ಮೈಲಿ ದೂರ.
     ಇವರ ವಿಶ್ವದ ಕ್ರಿಕೆಟಿನ ನಂ. 1 ತಾರೆ ಎಂದು  ಪರಿಗಣಿಸಿ ಭಾರತ ಸರಕಾರ ರಾಜ್ಯ ಸಭಾ ಸದಸ್ಯನನ್ನಾಗಿ  ಆರಿಸಿದೆ.  ಭಾರತ ಸರಕಾರದ ಅತ್ಯುನ್ನತ “ಭಾರತ ರತ್ನ” ಪದವಿ ಪುರಸ್ಕೃತ ಸಚಿನ್ ತೆಂಡುಲ್ಕರ್ ಒಬ್ಬ ಭಾಲಾವಲೀಕಾರ್.

    ಕೃಪೆ:  ಗೌಡ ಸಾರಸ್ವತ ಪರಿಚಯ ಗ್ರಂಥ (ಮರಾಠಿ)
            (ಸಾರಸ್ವತ ಪ್ರಕಾಶನ ಮುಂಬೈ)

ತರ್ಜುಮೆ : ಶ್ರೀ ಪುರುಷೋತ್ತಮ ಭಟ್ ದೇರ್ಕಜೆ

No comments:

Post a Comment