ಭಾಲಾವಲೀಕರ್ ಸಾರಸ್ವತ ಸಮಾಜದ ಕುರಿತು 1884, 1886, 1947 ಮತ್ತು 1948 ರ ಕೆಲವು
ದಾಖಲೆಗಳು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸುವ
ಕುರಿತು ಪ್ರಯತ್ನಗಳು ನಡೆಯುತ್ತಿವೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರಾಜಾಪುರ ತಾಲೂಕಿನ ಭಾಲಾವಲಿ ಗ್ರಾಮದಲ್ಲಿ ನಮ್ಮ ಪೂರ್ವಜರು ನೆಲೆನಿಂತಿದ್ದರು
ಎಂದು ಈಗಾಗಲೇ ಅನೇಕ ದಾಖಲೆಗಳಿಂದ ಶ್ರುತಪಟ್ಟಿದೆ. ಅಲ್ಲಿಂದಲೇ ನಮ್ಮ ಪೂರ್ವಜರು ಮಂಗಳೂರು,
ಬಂಟ್ವಾಳ, ಬೆಳ್ತಂಗಡಿ, ಕಾಸರಗೋಡು, ಸುಳ್ಯ ಮತ್ತು ಕೊಡಗು ಜಿಲ್ಲೆಗಳಲ್ಲಿ ಬಂದು ನೆಲೆಸಿದ್ದರು
ಎಂದು ಇತಿಹಾಸ ಮತ್ತು ದಾಖಲೆಗಳು ಹೇಳುತ್ತಿವೆ. ಮಹಾರಾಷ್ಟ್ರದ ಭಾಲಾವಲಿಯಿಂದ ಬಂದ ನಮ್ಮ
ಪೂರ್ವಜರು ಭಾಲಾವಲೀಕಾರರಾದುದರಿಂದ ಇಲ್ಲಿ ಬಂದು ನೆಲೆಸಿದ ನಾವುಗಳು ಭಾಲಾವಲೀಕಾರರೆ ಆಗಿದ್ದೇವೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಹಿನ ದಾಖಲೆಗಳನ್ನು
ಸಂಗ್ರಹಿಸಿ http://bsbsinfo.blogspot.in/
websiteನಲ್ಲಿ ಹಾಕಲು
ಪ್ರಯತ್ನಿಸುತ್ತಿದ್ದೇವೆ.
ಇತಿ,
BSBS
No comments:
Post a Comment